Nagara Navile Sri Nageshwaraswamy Temple

Sri Nageshwaraswamy Temple

Nagara Navile Sri Nageshwaraswamy Temple

Sri Nageshwaraswamy temple is located at Nagara Navile, neari Bagur in Channarayapattana of Hassan district in Karnataka. A place which had been covered with dense forest in the distant past, is today a pilgrim centre due to the existence of a temple dedicated to Sri Nageshwaraswamy, one of the forms of Lord Shiva. According to sources, the temple of Sri Nageshwaraswamy was renovated by the descendants of Hoysala dynasty. They also created facilities for devotees to stay. In Sri Nageshwaraswamy temple, apart from the presiding deity, which is in the form of a Linga, there are stone images of serpent. On the premises of this temple, there is a cave dedicated to Sri Lakshminarayana facing south. It is said that there was a tunnel in this cave through which people used to go to Sri Renuka Devi temple to offer worship to the goddess there

ನಾಗರ ನವಿಲೆ ಶ್ರೀ ನಾಗೇಶ್ವರಸ್ವಾಮಿ ದೇವಾಲಯ

ಚನ್ನಣರಾಯಪಟ್ಟಣ ತಾಲ್ಲೂಕು ಬಾಗೂರು ಸಮೀಪದಲ್ಲಿರುವ ನಾಗರ ನವಿಲೆ ಎಂಬಲ್ಲಿ ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನವಿದೆ. ಬಹುಕಾಲದ ಹಿಂದೆ ಅಗಮ್ಯ ಅರಣ್ಯದಿಂದ ಆವೃತವಾಗಿದ್ದ ಈ ಸ್ಥಳವು ಇಂದು ಶ್ರೀ ನಾಗೇಶ್ವರಸ್ವಾಮಿಯ ಸನ್ನಿಧಾನದಿಂದ ಒಂದು ಪವಿತ್ರ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಐತಿಹಾಸಿಕ ದಾಖಲೆಗಳಿಂದ ತಿಳಿದುಬರುವುದೇನೆಂದರೆ ಹೊಯ್ಸಳ ವಂಶಸ್ಥರು ಇಲ್ಲಿನ ಶ್ರೀ ನಾಗೇಶ್ವರಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಪ್ರವಾಸಿಗರಿಗೆ ಹಾಗೂ ಭಗವದ್ಭಕ್ತರಿಗೆ ಇಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿರುವರು.  ಶ್ರೀ ನಾಗೇಶ್ವರಸ್ವಾಮಿ ದೇವಾಲಯದಲ್ಲಿ ಲಿಂಗ ರೂಪದಲ್ಲಿರುವ ಪರಶಿವನ ಮೂರ್ತಿಯಲ್ಲದೆ, ಸರ್ಪರೂಪದಲ್ಲಿರುವ ನಾಗದೇವತೆಯ ಸುಂದರವಾದ ಶಿಲಾ ಮೂರ್ತಿಯನ್ನು ಕಾಣಬಹುದು. ದೇವಾಲಯದ ಆವರಣದಲ್ಲಿ ದಕ್ಷಿಣಭಿಮುಖವಾಗಿ ಶ್ರೀ ಲಕ್ಷ್ಮಿನಾರಾಯಣ ಗುಹೆಯೊಂದಿದ್ದು ಅದರಲ್ಲಿ ಶ್ರೀ ರೇಣುಕಾದೇವಿ ದೇವಾಲಯಕ್ಕೆ ಹೋಗಲು ಸುರಂಗಮಾರ್ಗವಿತ್ತು, ಅದರ ಮೂಲಕ ಪೂಜೆ ಸಲ್ಲಿಸಲು ಜನಗಳು ನಡೆದು ಹೋಗುತ್ತಿದ್ದರು ಎಂದು ಹೇಳಲಾಗುತ್ತದೆ. ಶ್ರೀ ನಾಗೇಶ್ವರಸ್ವಾಮಿಯ ಮೂರ್ತಿಯನ್ನು ಹೊಂದಿಕೊಂಡಂತೆ ಶ್ರೀ ಪಾರ್ವತಮ್ಮನವರ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಪಾರ್ವತಿ ದೇವಿಯ ಮುಂಭಾಗದಲ್ಲಿ ಶ್ರೀ ನಾಗೇಶ್ವರಸ್ವಾಮಿ ತೀರ್ಥ ಎಂದು ಕರೆಯಲಾಗುವ ಕೊಳವಿದೆ. ಶ್ರೀ ನಾಗೇಶ್ವರಸ್ವಾಮಿ ದೇವಸ್ಥಾನದ ಸುತ್ತಮುತ್ತ ಶ್ರೀ ಸೋಮೆಶ್ವರಸ್ವಾಮಿ, ಶ್ರೀ ಬ್ರಹ್ಮಲಿಂಗೇಶ್ವರ, ಶ್ರೀ ಸಿದ್ದೇಶ್ವರಸ್ವಾಮಿ ಹಾಗೂ ಶ್ರೀ ಮಲ್ಲೇಶ್ವರಸ್ವಾಮಿಗಳ ದೇವಸ್ಥಾನಗಳಿದ್ದು, ಪಂಚಲಿಂಗಗಳಿಂದ ಕೂಡಿವೆ. ಕಡೇ ಕಾರ್ತೀಕ ಸೋಮವಾರದಂದು ತಲಕಾಡಿನಲ್ಲಿ ದೊರೆಯುವ ಪಂಚಲಿಂಗ ದರ್ಶನದಂತೆ ನಾಗರ ನವಿಲೆಯಲ್ಲಿಯೂ ಪವಿತ್ರ ಪಂಚಲಿಂಗ ದರ್ಶನದ ಅನುಭವವಾಗುತ್ತದೆ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us

Your Name (required)

Your Email (required)

Direction

© Copyright 2017 by Pureprayer