Gorur Dam

Gorur Dam

A dam has been constructed across Hemavati River, an important tributary of the Kaveri. The dam is located at Gorur, near Hassan in Karnataka. Built in 1979, the reservoir has been providing water for drinking and irrigation purposes for the people of Hassan district.
Hemavati Dam is very vast and covers a catchment area of 2,810 sq. km. This dam is 4,692 m long and 58.5 m high. The gross storage capacity of this dam is 1,050.63 mcm. The reservoir has six large radial spillway gates.

 

A majestic picnic spot

Hemavati dam presents a beautiful look to the visitors, especially during rainy season, when the spillway gates are opened to release the flooding waters that gush out like froth. A garden covered with a green lawn right next to the dam enhances the beauty of the atmosphere as well as the location. The garden is often visited by local people. A visit to the dam in the early hours of the morning is highly gracious, pleasant and inspiring. Various water birds keep flying and diving into the waters.

The temples of Sri Paravasudeva and Sri Yoganarasimha are very close to the dam and are popular tourist destinations. The best time to visit Hemavati reservoir is the period between October and March.

ಗೊರೂರು ಅಣೆಕಟ್ಟು

ಕರ್ನಾಟಕದಲ್ಲಿರುವ ಹಾಸನದ ಸಮೀಪದ ಗೊರೂರು ಎಂಬಲ್ಲಿ ಕಾವೇರಿಯ ಪ್ರಮುಖ ಉಪನದಿಯಾದ ಹೇಮಾವತಿಗೆ ಅಡ್ಡಲಾಗಿ 1979ರಲ್ಲಿ ಅಣೆಕಟ್ಟೊಂದನ್ನು ನಿರ್ಮಿಸಲಾಯಿತು. ಈ ಜಲಾಶಯದ ನಿರ್ಮಾಣದಿಂದ ಹಾಸನ ಜಿಲ್ಲೆಯ ನಿವಾಸಿಗಳಿಗೆ ಕುಡಿಯಲು ಮತ್ತು ಕೃಷಿ ಕಾರ್ಯಗಳಿಗೆ ನೀರು ದೊರೆಯುವಂತಾಯಿತು.
ಹೇಮಾವತಿ ಜಲಾಶಯವೆಂದು ಕರೆಯಲಾಗಿರುವ ಈ ಅಣೆಕಟ್ಠು ಅತ್ಯಂತ ವಿಶಾಲವಾಗಿದೆ. ಸುಮಾರು 2,810 ಚದುರ ಕಿ.ಮೀ.ನಷ್ಟು ಜಲಾನಯನ ಪ್ರದೇಶವನ್ನು ಹೊಂದಿರುವ ಹೇಮಾವತಿ ಜಲಾಶಯದ ಉದ್ದ 4,692 ಮೀ. ಮತ್ತು ಎತ್ತರ 58.5 ಮೀ. ಹೇಮಾವತಿ ಜಲಾಶಯದ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 1,050.63 ಘನ ಮೀ. ಆಗಿದ್ದು ಆರು ಸ್ಪಿಲ್‍ವೇ ಗೇಟ್‍ಗಳನ್ನು ಹೊಂದಿದೆ.

 

ಭವ್ಯವಾದ ಪ್ರವಾಸಿ ತಾಣ

ವರ್ಷಾಕಾಲದಲ್ಲಿ ಭೋರ್ಗರೆಯುವ ಹೇಮಾವತಿ ಜಲಾಶಯವು ರುದ್ರ ರಮಣೀಯವಾಗಿರುತ್ತದೆ. ಮಳೆಗಾಲದಲ್ಲಿ ನದಿಯು ತುಂಬಿ ಹರಿಯುವುದರಿಂದ ಜಲಾಶಯದ ಸ್ಪಿಲ್‍ವೇ ಗೇಟ್‍ಗಳನ್ನು ತೆರೆಯಲಾಗುತ್ತದೆ. ಆಗ ನೊರೆ-ನೊರೆಯಾಗಿ ರಭಸದಿಂದ ಧುಮ್ಮಿಕ್ಕುವ ಹೇಮೆಯ ನೋಟ ವರ್ಣಿಸಲಸದಳ. ಅಣೆಕಟ್ಟಿನ ಬದಿಯಲ್ಲೆ ಹಸಿರು ಹುಲ್ಲನ್ನು ಹೊದ್ದಿರುವಂತೆ ಕಾಣುವ ಮನೋಹರವಾದ ಹೂದೋಟವು ಮೈ-ಮನಗಳಿಗೆ ಮುದ ನೀಡುತ್ತದೆ. ಪ್ರಾತಃಕಾಲದಲ್ಲಿ ಅನೇಕ ಪಕ್ಷಿಗಳು ಇಲ್ಲಿ ಚಿಲಿ-ಪಿಲಿ ಶಬ್ದಗಳೊಂದಿಗೆ ಹಾರಾಡುತ್ತಿರುತ್ತವೆ.
ಹೇಮಾವತಿ ಅಣೆಕಟ್ಟಿನ ಸನಿಹದಲ್ಲಿ ಶ್ರೀ ಪರವಾಸುದೇವ ಹಾಗೂ ಶ್ರೀ ಯೋಗಾನರಸಿಂಹರ ದೇವಾಲಯಗಳಿವೆ. ಪ್ರತಿವರ್ಷ ಅಕ್ಟೋಬರ್ ಹಾಗೂ ಮಾರ್ಚ್ ತಿಂಗಳುಗಳ ನಡುವೆ ಹೇಮಾವತಿಯನ್ನು ಸಂದರ್ಶಿಸಲು ಸೂಕ್ತವಾದ ಕಾಲ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer