Halebid

Halebid

Halebid

A place which had attained the peak of glory and fame as the capital of Hoysalas, Halebid was earlier known as Dwarasamudra because the Yadavas of Dwaraka had come and settled here, according to Puranic sources. Later, Vishnuvardhana of the Hoysala dynasty made this place as his capital. Remnants of the castles and palaces of Hoysala period are still found in and around this place. After the two major attacks in 1314 and 1320, the place assumed the name of Halebid or an old locality as there were sparse and scattered remnants of glorious buildings of the past.

Ketumalla, a Minister during Vishnuvardhana regime, had high regards for the king and the queen. As a token of his affection and compassion for the king and queen, Ketumalla got a Shiva temple in 1121 A.D. in the Dwikutachala style of architecture. Known as Sri Hoysaleshwara temple, this beautiful shrine has 64 angles and stands as a wonderful manifestation of the Hoysala style of sculpture. Created with four doors, the temple features two mammoth Nandi statues in the front side. The bottom strips of the outer walls of the temple contain beautifully carved images of elephants, lions, horses, instances drawn from Bhagavata, Ramayana and Mahabharata and leaf-fringed creepers. The doors have been bedecked with ceremonial arch. Carvings of epic instances can also be seen on the rear wall. Idols of dancing Ganapati and Shiva and Parvati on the back of Shiva’s vehicle Nandi (Bull) are also seen here.

There are 108 enchanting pillars inside Sri Hoysaleshwara temple and each pillar provides a distinct experience and feeling to the visitor. The inner ceiling of the temple is adorned with Ashtadikpalakas or guardians of the eight directions, namely Indra, Ajni (Fire God), Varuna (Rain God), Vayu (Air God), Kubera (celestial Treasurer), Nairuti (Lord of South-west), Makara (crocodile) and Eeshanya (Lord of North-west) have been placed in their respective positions. Idols of Nandi and Bhrungi, the door-keepers, are monolithic creations. The garland of skulls adorning them is a fine example for the subtlety and sculptural dexterity. The aesthetically created two Navarangs or spots meant for stage-show, have enhanced the attraction of the temple. Statues of Hoysaleshwara and Shantaleshwara in the form of Linga are also seen in this temple.

A temple dedicated to Lord Kedareshwara is said to have been created here during the period of Vishnuvardhana.

ಹಳೇಬೀಡು

ಹೊಯ್ಸಳರ ರಾಜಧಾನಿಯಾಗಿ ಮೆರೆದ ಹಳೇಬೀಡು ಹಿಂದೆ ದ್ವಾರಸಮುದ್ರವೆಂದು ಕರೆಯಲ್ಪಡುತ್ತಿತ್ತು. ತ್ರೇತಾಯುಗದಲ್ಲಿದ್ದ ಯಾದವ ವಂಶಸ್ಥರು ದ್ವಾರಕಾಪಟ್ಟಣದಿಂದ ಬಂದು ಇಲ್ಲಿ ನೆಲೆಸಿದ್ದರೆಂಬ ಪ್ರತೀತಿ ಇದೆ. ಮುಂದೆ ಈ ಸ್ಥಳವನ್ನು ಹೊಯ್ಸಳ ಅರಸು ವಿಷ್ಣುವರ್ಧನನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಆತನು ನಿರ್ಮಿಸಿದ್ದ ಅರಮನೆಯ ಅವಶೇಷಗಳು ಇಂದಿಗೂ ಹಲೇಬೀಡಿನಲ್ಲಿ ಕಂಡು ಬರುತ್ತವೆ. ದ್ವಾರಸಮುದ್ರವು ಅನೇಕ ಬಾರಿ ದಾಳಿಗೆ ಒಳಗಾದುದರಿಂದ ಕೇವಲ ಪಳಿಯುಳಿಕೆ ಹಾಗೂ ಛಿನ್ನ-ಭಿನ್ನವಾದ ಕೋಟೆ-ಕೊತ್ತಲಗಳ ಅವಶೇಷಗಳುಳ್ಳ ಹಳೇಬೀಡಾಗಿ ಪರಿವರ್ತನೆಗೊಂಡಿತು.
ವಿಷ್ಣುವರ್ಧನನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೇತುಮಲ್ಲನು ರಾಜ ಮತ್ತು ರಾಣಿಯರ ಮೇಲೆ ಅಪಾರವಾದ ಗೌರವಾದರಗಳನ್ನು ಹೊಂದಿದ್ದನು. ಅದರ ಸಂಕೇತವಾಗಿ ದ್ವಾರಸಮುದ್ರದಲ್ಲಿ ದ್ವಿಕುಟಚಲ ಶೈಲಿಯ ಶಿವಾಲಯದ ನಿರ್ಮಾಣ ಕಾರ್ಯವನ್ನು 1121ರಲ್ಲಿ ಕೈಗೆತ್ತಿಕೊಂಡನು. ಅರವತ್ತನಾಲ್ಕು ಮೂಲೆಗಳಿಂದ ಕೂಡಿದ ವೈಭವೋಪೇತವಾದ ಈ ದೇವಾಲಯವನ್ನು ಹೊಯ್ಸಳರ ವಾಸ್ತು ಶಿಲ್ಪಸೈಲಿಯನ್ನನುಸರಿಸಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ನಾಲ್ಕು ದ್ವಾರಗಳಿದ್ದು, ಮುಂಭಾಗದಲ್ಲಿ ಬೃಹದಾಕಾರವಾದ ಎರಡು ನಂದಿಗಳಿವೆ. ದೇವಸ್ಥಾನದ ಹೊರಗಡೆಯ ಪಟ್ಟಿಕೆಯಲ್ಲಿ ಆನೆ, ಸಿಂಹ, ಕುದುರೆಗಳ ಸುಂದರ ಕೆತ್ತನೆಗಳಿವೆ. ಹೆಬ್ಬಾಗಿಲಿನ ಮೇಲಿರುವ ಮಕರ ತೋರಣವು ಚಿತ್ತಾಕರ್ಷಕ ಬಳ್ಳಿಗಳಿಂದ ಆವೃತವಾಗಿದೆ. ಭಾಗವತ, ರಾಮಾಯಣ, ಮಹಾಭಾರತಗಳಿಂದಾಯ್ದ ಸುಂದರ ದೃಶ್ಯಗಳನ್ನು ಚಿತ್ರಿಸಲಾಗಿದೆ. ದೇವಸ್ಥಾನದ ಹಿಂಭಾಗದ ಗೋಡೆಯ ಮೇಲೆಯೂ ಸಹ ಸುಂದರ ಕೆತ್ತನೆಗಳಿವೆ. ನಾಟ್ಯ ಭಂಗಿಯಲ್ಲಿರುವ ಬಲಮುರಿ ಗಣೇಶ ಹಾಗೂ ನಂದಿಯ ಮೇಲೆ ಆರೂಢನಾಗಿರುವ ಶಿವ ಪಾರ್ವತಿಯರ ವಿಗ್ರಹಗಳನ್ನು ಇಲ್ಲಿ ನೋಡಬಹುದು.
ಶ್ರೀ ಹೊಯ್ಸಳೇಶ್ವರ ದೇವಾಲಯದ ಒಳಭಾಗದಲ್ಲಿ ಸುಂದರವಾದ 108 ಕಂಬಗಳಿದ್ದು ಪ್ರತಿಯೊಂದು ಕಂಬವೂ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಮೇಲ್ಭಾಗದ ಛಾವಣಿಯಲ್ಲಿ ಅಷ್ಠದಿಕ್ಪಾಲಕರಾದ ಇಂದ್ರ, ಅಗ್ನಿ, ವರುಣ, ವಾಯು, ಕುಬೇರ, ನೈಋತಿ, ಮಕರ, ಈಶಾನ್ಯ ಇವರುಗಳನ್ನು ಅವರವರ ಗಣಗಳ ಸಮೇತವಾಗಿ ಅವರವರ ದಿಕ್ಕುಗಳಲ್ಲಿ ಸ್ಥಾಪಿಸಲಾಗಿದೆ. ದ್ವಾರಪಾಲಕರಾದ ನಂದಿ ಮತ್ತು ಭೃಂಗಿಗಳನ್ನು ಏಕಶಿಲೆಯಲ್ಲಿ ರಚಿಸಲಾಗಿದೆ. ಇವರ ಮುಕುಟದಲ್ಲಿರುವ ರುಂಡಗಳು ಸೂಕ್ಷ್ಮ ಕಲಾನೈಪುಣ್ಯತೆಗೆ ಮಾದರಿಗಳಂತಿವೆ. ಸುಂದರವಾದ ಎರಡು ನವರಂಗ ಈ ದೇವಾಲಯದ ಶೋಭೆಯನ್ನು ಹೆಚ್ಚಿಸಿವೆ. ಹೋಯ್ಸಳೇಶ್ವರ ಹಾಗೂ ಶಾಂತಳೇಶ್ವರವೆಂಬ ಎರಡು ಶಿವಲಿಂಗಗಳೂ ಈ ದೇವಾಲಯದಲ್ಲಿ ಕಾಣಸಿಗುತ್ತವೆ.
ವಿಷ್ಣುವರ್ಧನನ ಕಾಲದಲ್ಲಿ ಕೇದಾರೇಶ್ವರ ದೇವಾಲಯವೊಂದು ಇದೇ ಸ್ಥಳದಲ್ಲಿ ನಿರ್ಮಾಣಗೊಂಡಿತೆಂದು ಪ್ರತೀತಿ ಇದೆ.

Leave a Reply

Your email address will not be published. Required fields are marked *

Designed & Developed by Pureprayer

Gallery

Contact Us





Your Name (required)

Your Email (required)

Direction

© Copyright 2017 by Pureprayer