RUDRAPATNA - A Village of Music and Culture

RUDRAPATNA - A Village of Music and Culture

Several maestros of music and knowledge have brought accolades to this tiny village called Rudrapatna on the banks of Kaveri River in Arakalgud taluk of Hassan district in Karnataka. Vidwan Shankar Bhat treads down the memory lane.

Rudrapatna is known for its rich musical heritage. According to renowned Carnatic Vocalist Sri R.K. Padmanaabha, Rudrapatna is a hub of Veda, Nada and Taranga. Rudramantapa has contributed several distinguished musicians in Carnatic style. Residents of this village originally migrated from Sengottai in Tirunelveli district of Tamil Nadu. They came in two groups. While one group settled down at Koushik, another village in Hassan, another group landed in Bettadapura from where they slowly started living in villages situated on the banks of Kaveri River. One such village was Rudrapatna. Sanketis, as they were known, practised Vedas and music. While Dikhitars and Somayajis performed Yajnas and Yagas, others focussed on learning Shatavadhana, chanting of Vedic hymns and learning music. Several Ghanapathis, Shatavadhanis, Ashtavadahanis and musicians from this village have made permanent marks here. Sri Channakeshava temple in this village is more than a thousand years old.

 

Sri Padhamanabha recalls that some years ago a mass desertion of the village occurred due to outbreak of plague. He claims that nearly 60 per cent of musicians in Carnatic style across Karnataka hail from Rudrapatna. R.S. Keshvamurthy, R.K. Ramanathan, R.K. Srikanthan, R.K. Srinivasamurthy, R.K. Suryanarayana, R.N. Taranathan (also known as Rudrapatnam Brothers), R.K. Raghavan, R.K. Prakash, R.K. Prasanna Kumar, R.K. Padmanabha, R.S. Ramakanth, R.N. Sreelatha and Ratnamala Prakash, who have carved a niche for themselves in the annals Carnatic music, hail from Rudrapatna. R.K. Krishna Shastry was another noted vocalist and Harikatha Vidwan from Rudrapatana. Venkataramaiah, renowned as Thimmappa, was a great Veena Vidwan. Shatavadhani Venkataraya was also a popular Veena Vidwan. Veena Ranganath and R.S. Keshava Murthy, who was a disciple of the legendary Veene Subbanna, are from Rudrapatana. Music critic Mysore V. Subrahmanya pays rich tribute to several musicians and scholars, including Veena Ranga Shastry, who was a court

 

ರುದ್ರಪಟ್ಣ – ಸಂಗೀತ, ಸಂಸ್ಕೃತಿಗಳ ಗ್ರಾಮ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಕಾವೇರಿ ನದಿ ತೀರದಲ್ಲಿರುವ ರುದ್ರಪಟ್ಣ ಗ್ರಾಮವು ಸಂಗೀತಗಾರರ ಮತ್ತು ವಿದ್ವನ್ಮಣಿಗಳ ಗ್ರಾಮವೆಂದೇ ಗುರುತಿಸಲ್ಪಡುತ್ತದೆ. ವಿದ್ವಾನ್ ಶಂಕರ ಭಟ್ಟರು ತಮ್ಮ ನೆನಪಿನಂಗಳದಲ್ಲಿ ಹೀಗೆ ಸಂಚರಿಸುತ್ತಾರೆ.

 

ಕರ್ನಾಟಕ ಸಂಗೀತ ವಿದ್ವಾಂಸರಾದ ಶ್ರೀ ಆರ್.ಕೆ. ಪದ್ಮನಾಭ ಅವರು ಹೇಳುವಂತೆ, ರುದ್ರಪಟ್ಟ್ಣವು ವೇದ, ನಾದ ತರಂಗಗಳ ಸಂಗಮ. ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ರುದ್ರಪಟ್ಟ್ಣ್ವು ಹಲವು ಉನ್ನತ ಶ್ರೇಣಿಯ ಸಂಗೀತ ಕಲಾವಿದರನ್ನು ನೀಡಿರುವುದು ಪ್ರಶಂಸನೀಯ. ಮೂಲತಃ ಈ ಗ್ರಾಮಸ್ಥರು ತಮಿಳು ನಾಡಿನಲ್ಲಿರುವ ತಿರುನೆಲ್ವೇಲಿ ಜಿಲ್ಲೆಯ ಸೆಂಗೊಟ್ಟೈ ಎಂಬ ಹಳ್ಳಿಯಿಂದ ವಲಸೆ ಬಂದವರು. ಆರಂಭದಲ್ಲಿ ಎರಡು ಗುಂಪುಗಳಲ್ಲಿ ಬಂದ ಈ ವಲಸಿಗರಲ್ಲಿ ಒಂದು ಗುಂಪು ಕೌಶಿಕವೆಂಬ ಗ್ರಾಮದಲ್ಲಿ ನೆಲೆಸಿದರು. ಮತ್ತೊಂದು ಗುಂಪು ಕಾವೇರಿ ತೀರದಲ್ಲಿದ್ದ ಬೆಟ್ಟದಪುರ ಮುಂತಾದ ಗ್ರಾಮಗಳಲ್ಲಿ  ಬೀಡು ಬಿಟ್ಟರು. ಅವುಗಳಲ್ಲಿ ರುದ್ರಪಟ್ಣವು ಒಂದು. ಸಂಕೇತಿಗಳೆಂದು ಕರೆಯಲ್ಪಡುವ ಈ ಗ್ರಾಮಸ್ಥರು ವೇದಾಧ್ಯಯನ ಹಾಗೂ ಸಂಗೀತಾಭ್ಯಾಸಗಳ ಕಡೆಗೆ ಹೆಚ್ಚು ಗಮನ ನೀಡಿದರು. ಅವರಲ್ಲಿ ಕೆಲವರು ಶತಾವಧಾನಿಗಳಾಗಿದ್ದು ವೇದವಿದ್ಯಾ ಪಾರಂಗತರಾಗಿದ್ದರು. ದೀಕ್ಷಿತರು ಮತ್ತು ಸೋಮಯಾಜಿಗಳೆಂದು ಗುರುತಿಸಲ್ಪಡುವ ಅನೇಕರು ವೇದ ಮಂತ್ರಗಳನ್ನು ಮತ್ತು ಸಂಗೀತಾಭ್ಯಾಸವನ್ನು ಮಾಡುವ ಕಡೆ ಹೆಚ್ಚು ಗಮನ ನೀಡಿದರು. ರುದ್ರಪಟ್ಣದಲ್ಲಿ ಅನೇಕ ಘನಪಾಠಿಗಳು, ಶತಾವಧಾನಿಗಳು, ಅಷ್ಟಾವಧಾನಿಗಳು ಹಾಗೂ ಸಂಗೀತ ವಿದ್ವಾಂಸರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಈ ಗ್ರಾಮದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯವು ಒಂದು ಸಹಸ್ರ ವರ್ಷಗಳಷ್ಟು ಪ್ರಾಚೀನವಾದುದು.

 

ಶ್ರೀ ಪದ್ಮನಾಭ ಅವರು ಹಲವು ವರ್ಷಗಳ ಹಿಂದೆ ಪ್ಲೇಗ್ ಪಿಡುಗು ತಲೆದೋರಿದ್ದರಿಂದ ಅನೇಕ ಮಂದಿ ಈ ಗ್ರಾಮವನ್ನು ಬಿಟ್ಟು ಪಲಾಯನ ಮಾಡಿದ್ದುದನ್ನು ನೆನಪಿಸಿಕೊಂಡರು. ಶ್ರೀ ಪದ್ಮನಾಭ ಅವರ ಪ್ರಕಾರ ನಮ್ಮ ರಾಜ್ಯದಲ್ಲಿರುವ ಶೇಕಡ 60ರಷ್ಟು ಸಂಗೀತಗಾರರು ರುದ್ರಪಟ್ಣಕ್ಕೆ ಸೇರಿದವರು. ಆರ್.ಎಸ್. ಕೇಶವಮೂರ್ತಿ, ಆರ್.ಕೆ. ರಾಮನಾಥನ್, ಆರ್.ಕೆ. ಶ್ರೀಕಂಠನ್, ಆರ್.ಕೆ. ಶ್ರೀನಿವಾಸಮೂರ್ತಿ, ಆರ್.ಕೆ. ಸೂರ್ಯನಾರಾಯಣ, ಆರ್.ಎನ್. ತಾರಾನಾಥನ್ (ರುದ್ರಪಟ್ಣ ಸೋದರರೆಂದು ಖ್ಯಾತಿ ಹೊಂದಿದ್ದವರು), ಆರ್.ಕೆ.ರಾಘವನ್, ಆರ್.ಕೆ.ಪ್ರಕಾಶ್, ಆರ್.ಕೆ.ಪ್ರಸನ್ನ ಕುಮಾರ್, ಆರ್.ಕೆ.ಪದ್ಮನಾಭ, ಆರ್.ಕೆ.ರಮಾಕಾಂತ, ಆರ್.ಎನ್. ಶ್ರೀಲತ ಹಾಗೂ ರತ್ನಮಾಲಾ ಪ್ರಕಾಶ್ ಎಂಬುವರು ಕರ್ನಾಟಕ ಸಂಗೀತ ಪರಂಪರೆಯಲ್ಲಿ ಖ್ಯಾತನಾಮರು. ಆರ್.ಕೆ.ಕೃಷ್ಣಶಾಸ್ತ್ರಿಯವರು ಪ್ರಖ್ಯಾತ ಸಂಗೀತಗಾರರು ಮತ್ತು ಹರಿಕಥಾ ವಿದ್ವಾಂಸರು. ತಿಮ್ಮಪ್ಪನೆಂದೇ ಖ್ಯಾತರಾಗಿದ್ದ ವೆಂಕಟರಾಮಯ್ಯನವರು ಸುಪ್ರಸಿದ್ಧ ವೀಣಾವಿದ್ವಾಂಸರು. ವೀಣಾ ರಂಗನಾಥ್ ಹಾಗೂ ವೀಣೆ ಸುಬ್ಬಣ್ಣನವರ ಶಿಷ್ಯರಾಗಿದ್ದ ಆರ್.ಎಸ್. ಕೇಶವಮೂರ್ತಿಯವರೂ ರುದ್ರಪಟ್ಣದವರು. ಖ್ಯಾತ ಸಂಗೀತ ವಿಮರ್ಶಕರಾದ ವಿ; ಸುಬ್ರಹ್ಮಣ್ಯರವರು ರುದ್ರಪಟ್ಣದ ಸಂಗೀತಗಾರರನ್ನು ಹೃತ್ಪೂರ್ವಕವಾಗಿ ಕೊಂಡಾಡುತ್ತಾರೆ. ಮೈಸೂರು ರಾಜರ ಆಸ್ಥಾನ ವಿದ್ವಾಂಸರಾಗಿದ್ದ ರಂಗಾ ಶಾಸ್ತ್ರಿಯವರನ್ನು ವಿಶೇಷವಾಗಿ ಸ್ಮರಿಸುತ್ತಾರೆ.

Designed & Developed by Pureprayer

Gallery

Contact Us

Your Name (required)

Your Email (required)

Direction

© Copyright 2017 by Pureprayer